ಅಡಮಾನ ಸಾಲವು ಸುರಕ್ಷಿತ ಸಾಲವಾಗಿದ್ದು ಅದು ಸ್ಥಿರಾಸ್ತಿಯನ್ನು ಒದಗಿಸುವ ಮೂಲಕ ಹಣವನ್ನು ಪಡೆಯಲು ಅನುಮತಿಸುತ್ತದೆ, ಉದಾಹರಣೆಗೆ ಮನೆ ಅಥವಾ ವಾಣಿಜ್ಯ ಆಸ್ತಿ, ತೆರೆದ ಪ್ಲಾಟ್ ಮತ್ತು ಮನೆಗಳನ್ನು ಸಾಲದಾತನಿಗೆ ಮೇಲಾಧಾರವಾಗಿ ನೀಡಿ ಸಾಲವನ್ನು ಪಡೆಯಬಹುದು. ನೀವು ಸಾಲವನ್ನು ಮರುಪಾವತಿ ಮಾಡುವವರೆಗೆ ಸಾಲದಾತನು ಆಸ್ತಿಯನ್ನು ಇಟ್ಟುಕೊಳ್ಳುತ್ತಾನೆ.
ಸಾಲಕ್ಕಾಗಿ ಬೇಕಾಗುವ ದಾಖಲಾತಿಗಳು:
1. ಸಾಲದ ಅರ್ಜಿ
2. ಸದಸ್ಯನ ಆಸ್ತಿ ಪತ್ರದ ದಾಖಲಾತಿಗಳು
(ಆಸ್ತಿ ಖರೀದಿ, ಆಸ್ತಿ ದಾನ, ಆಸ್ತಿ ವರ್ಗಾವಣೆ ಹಾಗೂ ಇನ್ನಿತರ ದಾಖಲಾತಿಗಳು)
3. ಸದಸ್ಯನ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಇತರೆ ದಾಖಲಾತಿ
4. 15 ವರ್ಷಗಳ ಇ ಸಿ
5. ಆಸ್ತಿಯ ಮೌಲ್ಯಮಾಪನ ವರದಿ
6. ಆಸ್ತಿಯ ಮೇಲೆ ವಕೀಲರಿಂದ ಕಾನೂನು ಸಲಹೆ ವರದಿ
7. ಜಾಮೀನುದಾರರ ಮಾಹಿತಿ (ಜಾಮೀನುದಾರರ ಕೆವೈಸಿ)
8. e-stamp ಬಾಂಡ್ ಪೇಪರ್ (ಸಾಲದ ಮೊತ್ತದ ಆಧಾರದ ಮೇಲೆ)
9. ಸಾಲದ ಮಾಸಿಕ ಕಂತು ಮರುಪಾವತಿಗಾಗಿ 5 ಚೆಕ್ ಹಾಳೆಗಳು
10. ಸಹಕಾರಿಯು ಬೇಡುವ ಇನ್ನಿತರ ದಾಖಲಾತಿಗಳು